
ಮಂಗಳೂರು: ಭಾರತವು ಇಂದು ಅಪಾಯಕಾರಿ ಸ್ಥಿತಿಯತ್ತ ವಾಲುತ್ತಿದೆ. ಭಾರತದ ವಿದೇಶಾಂಗ ನೀತಿಯು ಅಮೆರಿಕದ ಆದೇಶ ಮೇರೆಗೂ ಇಸ್ರೇಲ್‌ಗೆ ಅನುಕೂಲಕರಕವಾಗಿಯೂ ರೂಪುಗೊಳ್ಳುತ್ತಿದೆ. ಬೆಂಗಳೂರಿನ ಅರ್ಧದಷ್ಟು ಜನಸಂಖ್ಯೆ ಇಲ್ಲದ ಇಸ್ರೇಲ್ ಎಂಬ ರಾಷ್ಟ್ರದ ರಾಯಭಾರಿ ಕಚೇರಿಯನ್ನು ಬೆಂಗಳೂರಿನಲ್ಲಿ ಸ್ಥಾಪಿಸುವ ಅಗತ್ಯವಾದರೂ ಏನು? ಸೌದಿಅರೇಬಿಯದಲ್ಲಿ ಭಾರೀ ಸಂಖ್ಯೆಯಲ್ಲಿ ಭಾರತೀಯರು ಉದ್ಯೋಗದಲ್ಲಿದ್ದಾರೆ. ಆದರೆ ದೇಶದಲ್ಲಿ ಸೌದಿ ರಾಯಭಾರ ಕಚೇರಿ ಇರುವುದು ಮುಂಬೈಯಲ್ಲಿ ಮಾತ್ರ. ಇಸ್ರೇಲ್ ಎಂಬುದು ಜನರು ಉದ್ಯೋಗವನ್ನರಸಿ ಹೋಗಲು ಸಾಧ್ಯ ಇರುವಂತಹ ರಾಷ್ಟ್ರವಲ್ಲ. ಆದರೂ ಭಾರತ ಯಾಕೆ ಅಂತಹ ದೇಶದೊಂದಿಗೆ ಸಂಬಂಧ ಬೆಳೆಸುತ್ತಿದೆ ಎಂಬುದನ್ನು ನಾವು ಅರಿತುಕೊಳ್ಳಬೇಕಾಗಿದೆ ಎಂದು ರಾಷ್ಟ್ರೀಯ ಅಧ್ಯಕ್ಷ ಇ.ಅಬೂಬಕ್ಕರ್ ತಿಳಿಸಿದರು.
